ಯೂಥ್ ಫಾರ್ ಸೇವ ಸಂಸ್ಥೆಯವರು ಪರಿಸರ ಗಣಪತಿಯ ಬಗ್ಗೆ ಜಾಗೃತಿಯನ್ನ ಮೂಡಿಸತಕ್ಕಂತಹ ಕಾರ್ಯಕ್ರಮ, ಇವತ್ತಿನ ಕಾಲಕ್ಕೆ ಬಹಳ ಅಗತ್ಯ ಹಾಗೂ ಅನಿವಾರ್ಯವಾಗಿದೆ.
ಮೊದಲು, ಊರಿಗೊಂದು ಗಣಪತಿಯನ್ನ ಇಡುತ್ತಾ ಇದ್ದರು ಅಥವ ಕೆಲುವು ಊರುಗಳಲ್ಲಿ ಇಡುತ್ತಾನೆ ಇರಲ್ಲಿಲ್ಲಾ, ಹಾಗಾಗಿ ಕೆಲವೇ ಕೆಲವು ಗಣಪತಿ ಮೂರ್ತಿಯನ್ನು ಮಾಡುತ್ತಾ ಇದ್ದಿದ್ದರಿಂದ ಅಂತಹ ತೊಂದರೆಗಳು ಆಗುತ್ತಾ ಇರಲ್ಲಿಲ್ಲ.
ಈಗ ಪಟ್ಟಣದಲ್ಲಿ ನೋಡಿದರೆ ಒಂದೊಂದು ರಸ್ತೆಯಲ್ಲೂ ಸಾವಿರಾರು, ಬಣ್ಣದ ಗಣಪತಿಗಳನ್ನಾ ನಾವು ನೋಡುತ್ತಾ ಇದ್ದೀವಿ, ಹಾಗೂ ಬೃಹದಾಕಾರವಾಗಿ ಎಷ್ಟು ಸಾಧ್ಯವೋ ಅಷ್ಟು ದೊಡ್ಡದಾಗಿ ಮಾಡುವಂತಹ ಪ್ರವೃತ್ತಿಗೂ ಸಹ ಕೈ ಹಾಕ್ಕಿದ್ದಾರೆ.
ಇವತ್ತು ಅದರ ಮೇಲಿನೆ ಬಣ್ಣ ಮತ್ತು ಅದನ್ನು ತಯಾರು ಮಾಡಲು ಉಪಯೋಗಿಸುವಂತಹ ಸಾಮಗ್ರಿಗಳು ತೆಗೆದುಕೊಂಡು ಹೋಗಿ ಹಳ್ಳಕೊಳ್ಳಗಳಲ್ಲಿ ಬಿಟ್ಟಾಗ ಅಲ್ಲಿ ನೀರು ಮಾಲಿನ್ಯ ಆಗುತ್ತದೆ. ಹಾಗೆ ಪರಿಸರದ ಮೇಲೂ ಸಹ, ವಾಯು ಮೇಲೂನು ಸಹ ಮಾಲಿನ್ಯವಾಗುವುದರಿಂದ, ಈ ಜಲಮಾಲಿನ್ಯ, ವಾಯುಮಾಲಿನ್ಯ ಏರಡು ಸಹ ಮನುಷ್ಯನ ಆರೋಗ್ಯದಮೇಲೆ ಬಹಳ ತೊಂದರೆಯನ್ನುಂಟು ಮಾಡುತ್ತದೆ.
ಆ ದೃಷ್ಠಿಯಿಂದ ನಮ್ಮ ಬದುಕಿನ ಸುತ್ತ, ಒಳ್ಳೆ ಗಾಳಿ ಇರಬೇಕು, ಒಳ್ಳೆ ಬೆಳಕಿರಬೇಕು, ಒಳ್ಳೆ ವಾತವರಣ ಇರಬೇಕು. ಇದ್ದಕ್ಕಾಗಿ ಹರಸಿಕೋಂಡು ಅನೇಕ ಕಾಡುಗಳಲ್ಲಿ ಹೋಗಿ, ಅಲ್ಲೆಲ್ಲಾ ಅಡ್ಡಾಡಿ ಬರುವಂತಹ ಪರಿಸ್ಥಿತಿ ಇವತ್ತು ಹೆಚ್ಚಾಗುತ್ತಾಯಿದೆ.
ಆ ದೃಷ್ಠಿಯಿಂದ ನಾವು ದೇವರ ನೆಪದಲ್ಲಿ ಪರಿಸರವನ್ನು ಹಾಳುಮಾಡುವುದು ಸಾಧು ಅಲ್ಲ. ಮೂರ್ತಿ ಮಾಡೋಣ, ಆದರೆ ಮಣ್ಣಿಗೆ ನಿಜವಾದ ಬಣ್ಣ ಏನು ಇರುತ್ತೊ ಅದೇ ಬಣ್ಣದಲ್ಲಿ ಮೂರ್ತಿ ಮಾಡಿದರೆ, ದೇವರೇನು ಬೇಡ ಅನ್ನೋದಿಲ್ಲ . ಅದು ಸುಂದರವಾಗಿ ಕಾಣುತ್ತದೆ. ಅದು ಮಣ್ಣು, ಆ ಮಣ್ಣು ಮಣ್ಣಿನಲ್ಲಿ ಬೆರೆತಾಗ ನಮಗೆ ಏನು ತೊಂದರೆ ಆಗೋದಿಲ್ಲ.
ಆದ್ದರಿಂದ ಶುದ್ಧವಾದ ಮಣ್ಣಿನಿಂದ ಮಾಡಿದ ಗಣಪತಿಯನ್ನು ಮಾತ್ರ ಉಪಯೋಗಿಸಿ, ಬಣ್ಣ ಹಾಕಿದಂತಹ ಗಣಪತಿಯಿಂದ ಜನಜೀವನಕ್ಕೆ ಮಾರಕವಾಗುವುದರಿಂದ ಯಾವುದೇ ಕಾರಣಕ್ಕೆ ಅದನ್ನು ಉಪಯೋಗಿಸಬಾರದೆಂದು, ಈ ಮೂಲಕ ನಿಮ್ಮಲ್ಲಿ ನಾವು ಕೇಳಿಕೊಳ್ಳುತ್ತೇವೆ.
Click Here To Watch The Video Of Sri Sri Sri Balagangadharanatha Swamiji