ಗಣಪತಿ ಹಬ್ಬದಲ್ಲಿ ಪರಿಸರದ ಸಂರಕ್ಷಣೆ ಬಗ್ಗೆ ನಾವು ಹೆಚ್ಚಿನ ಗಮನ ಕೊಡಬೇಕು. ಬಣ್ಣ ಹಚ್ಚಿರುವ ಗಣಪತಿಯನ್ನ ವಿಸರ್ಜನೆ ಮಾಡಬಾರದು. ವಿಸರ್ಜನೆ ಮಾಡುವ ಹಾಗಿದ್ದರೆ , ನೈಸರ್ಗಿಕವಾದ ಬಣ್ಣಗಳ್ಳನ್ನ ಉಪಯೋಗಿಸಿದ ಗಣಪತಿಯನ್ನ ಮಾತ್ರ ವಿಸರ್ಜಿಸಬೇಕು.
ಅಥವ ಪೈಂಟ್ ಬೇಕಾಗಿಲ್ಲ ನೋಡಿ, ಈ ಆನೆ ನೋಡಿ ಒಂದೇ ಬಣ್ಣ, ಒಂದೇ ಬಣ್ಣದ ನೈಸರ್ಗಿಕವಾದ ಮಣ್ಣಿನ ಬಣ್ಣದ ಗಣಪತಿಯನ್ನಿಟ್ಟು ಪೂಜೆ ಮಾಡಿ. ಯಾಕೆ ಅಂದರೆ, ಈ ಪೈಂಟೆಲ್ಲಾ ಹಾಕಿ, ಗಂಗೆ ಭವಾನಿಯನ್ನ ಪ್ರದೂಷಣ ಮಾಡಬಾರದು.
ಗಣಪತಿ ವಿಸರ್ಜನೆಗು ಮೊದಲು, ಗಂಗಭವಾನಿಯನ್ನ ಪೂಜೆ ಮಾಡ್ತೀವಿ, ಆಮೇಲೆ, ಗಣಪತಿಯನ್ನ ಕೆರೆಯಲ್ಲೊ, ನೀರಲ್ಲೊ ವಿಸರ್ಜನೆ ಮಾಡ್ತಿವಿ.ಆ ಗಂಗೆ ಪೂಜೆ ಮಾಡೋ ಅರ್ಥವೇನು?..ಅಲ್ಲಿ ಕಸವನ್ನ, ಪೂಜಾ ಸಾಮಗ್ರಿಗಳನ್ನ, ಪೈಂಟ್ ಹಾಕಿದ ಗಣಪತಿ ವಿಗ್ರಹಗಳನ್ನ ನೀರಲ್ಲಿ ಬಿಟ್ಟು ಕಲುಷಿತ ಮಾಡಬಾರದು, ಹಾಗೆ ಮಾಡಿದರೆ, ಆ ಗಂಗೆಗೆ ಸನ್ಮಾನ ಮಾಡಿದ ಹಾಗೆ ಆಗುವುದಿಲ್ಲ.
ಆದ್ದರಿಂದ, ಈ ಪಂಚ ತತ್ವಗಳಿವೆಯಲ್ಲ… ಭೂಮಿ, ಜಲ, ಅಗ್ನಿ, ವಾಯು, ಆಕಾಶ ಇವುಗಳನ್ನ ಪರಿಶುಧ್ಧವಾಗಿ ಇಟ್ಟುಕೊಳ್ಳಬೇಕು… ಅದು ನಿಜವಾದ ಪೂಜೆ. ಗಣಪತಿ ಪೂಜೆಯನ್ನೇ ದ್ಯಾನದಲ್ಲಿಟ್ಟುಕೊಂಡು, ನಮ್ಮ ಹೃದಯದಿಂದ ಪೂಜೆ ಮಾಡೋಣ, ಪರಿಸರವನ್ನ ಹಾಳುಮಾಡುವುದು ಬೇಡ.