ಪರಿಸರ ಸಂರಕ್ಷಣೆ ನಮ್ಮೆಲ್ಲರಹೊಣೆ:
ನಾವು ನಮ್ಮ , ದೈನಂದಿನ ವ್ಯವಹಾರದಲ್ಲಿ ಅನುಸರಿಸಬೇಕಾದ ಕೆಲವು ದೃಷ್ಠಿಕೋನವನ್ನು ಬೆಳಿಸಿಕೊಳ್ಳಬೇಕಾಗುತ್ತದೆ; ದೇಶಭಕ್ತಿ, ಪರಮಾತ್ಮನಲ್ಲಿ ಭಕ್ತಿ ಇತ್ಯಾದಿ ಪ್ರಮುಖ. ರಾಷ್ಟ್ರೀಯದೃಷ್ಟಿ ಧಾರ್ಮಿಕ ದೃಷ್ಟಿಯ ಜೊತೆಗೆ ಪರಿಸರ ಸಂರಕ್ಷಣೆಯು ಒಂದು ಭಾವನೆ, ಅದನ್ನೂ ಕೂಡ ನಾವು ಬೆಳಿಸಿಕೊಳ್ಳಬೇಕು.
ನಮ್ಮ ಹಿಂದಿನ ಎಲ್ಲರೂ ಕೂಡ ಅದರ ಕಡೆಗೆ ವಿಷೇಶ ಕಾಳಜಿ ವಹಿಸಿದ್ದಾರೆ. ಶ್ರೀಕೃಷ್ಣನಂತೂ ತನ್ನ ಅನೇಕ ಲೀಲೆಗಳಲ್ಲಿ ಇದ್ದನ್ನು ತೋರಿಸಿದ್ದಾನೆ.
ಉತ್ಸವಗಳಲ್ಲಿ ಗಣೇಶೋತ್ಸವ ಪ್ರಧಾನವಾದದ್ದು . ಗಣಪತಿ ಉತ್ಸವವನ್ನು ಆಚರಿಸುವಾಗ ಸಾಂಸ್ಕೃತಿಕ ದೃಷ್ಟಿಯನ್ನೇ ಮರೆತು ಕೇವಲ ಮನೋರಂಜನೆಯನ್ನೇ ಮನದಲ್ಲಿಟ್ಟುಕೊಂಡು ಸುತ್ತಲಿನ ಪರಿಸರವನ್ನು ಒಂದು ರೀತಿಯಲ್ಲಿ ಮಲಿನಗೊಳಿಸುತ್ತಿದೇವೇ.
ಗಣೇಶೋತ್ಸವವನ್ನು ಸುತ್ತಮುತ್ತಲಿನ ಜನರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಮಾಡಬೇಕಾದಂತ ಒಂದು ಉತ್ಸವ ಹಾಗು ಸಾಂಸ್ಕೃತಿಕ ದೃಷ್ಟಿ ಯಿಂದ ನಮ್ಮ ನಾಡಿನಲ್ಲಿ ನಡೆಯಬೇಕಾದಂತಹ ಒಂದು ದೊಡ್ಡ ಆಂದೋಲನ.
ಗಣಪತಿಯ ಉತ್ಸವದ ಸಾಂಸ್ಕೃತಿಕ ಪರಂಪರೆಗೆ ವಿರುದ್ಧವಾದ ಕಾರ್ಯಕ್ರಮವನ್ನು ನಡೆಸಬಾರದು. ಗಣಪತಿಯ ಮೂರ್ತಿಯ ನಿರ್ಮಾಣದ ಬಗ್ಗೆ , ಹಾಗು ಮೂರ್ತಿಯನ್ನು ವಿಸರ್ಜನೆ ಮಾಡುವಾಗ ನೀರಿನ ಮಾಲಿನ್ಯ ವಾಗದಂತೆ ನೋಡಿಕೊಳ್ಳಬೇಕು .
ದೊಡ್ಡಪ್ರಮಾಣದಲ್ಲಿ ದೊಡ್ಡ ದೊಡ್ಡ ಪ್ರತಿಮೆಗಳನ್ನು ನಿರ್ಮಿಸಿ ಅದನ್ನು ವಿಸರ್ಜನೆಮಾಡುವಂತ ಪರಿಪಾಠ ಬೆಳೆಯುತ್ತಾಯಿದೆ.ನೀರಿನ ಸ್ವಚ್ಛತೆಯನ್ನು ಕೂಡ ಕಾಪಾಡಿಕೊಳ್ಳ ಬೇಕಾದದ್ದು ಅತ್ಯಗತ್ಯ, ಅದಕ್ಕಾಗಿ ಗಣಪತಿಗೆ ಬಣ್ಣವನ್ನುಹಾಕುವಾಗ, ಅದರ ಬಗ್ಗೆ ಅನೇಕತರದ ಸಂಶೋದನೆಗಳು ನಡೆಯುತ್ತಾ ಇದೆ, ಅದನ್ನಾಧರಿಸಿ ಯಾವುದರಿಂದ ಪರಿಸರಕ್ಕೆ, ನೀರಿಗೆ ಹಾನಿಯಾಗುವುದಿಲ್ಲವೋ ಅಂತಹ ಬಣ್ಣಗಳನ್ನೇ ಬಳಿಸಿ ಬಣ್ಣಬಣ್ಣದ ಹೂವೂ ಮತ್ತು ಹಣ್ಣುಗಳಿಂದ ಅಲಂಕಾರಗಳನ್ನೆಲ್ಲಾಮಾಡಬಹುದು; ಬಣ್ಣದಕಡೆಗೆ ವಿಷೇಶ ಗಮನ ಕೊಡಬೇಕು .
ಗಣಪತಿಯ ವಿಸರ್ಜನೆಯ ಸಮಯದಲ್ಲಿ ಆಗುವ ಪರಿಸರಮಾಲಿನ್ಯವನ್ನು ಗಮನದಲ್ಲಿರಿಸಿ ಸಾಧ್ಯವಾದಷ್ಟು ಪರಿಸರಸ್ನೇಹಿಯಾದ ಪದಾರ್ಥಗಳ ಬಳಕೆಯೊಂದಿಗೆ ಉತ್ಸವಾಚರಣೆ ನಡೆದು, ಉತ್ಸವಗಳನ್ನು ಅರ್ಥಪೂರ್ಣವಾಗಿ ನಡೆಸಲು ಜನಗಳ ಸಹಕಾರ ಅತ್ಯವಷ್ಯಕವಾಗಿ ಬೇಕೆಂದು ನಾವು ಅಪೇಕ್ಷಿಸುತ್ತಿದ್ದೇವೆ.
Click Here To Watch The Video Of Sri Visvesha Teertha Swamiji