CATEGORIES

NEWSLETER


 

ಪರಮಪೂಜ್ಯ ಡಾ|ಶ್ರೀ ಶಿವಮೂರ್ತಿ ಮುರುಘ ಶರಣರು

SriShivaMurthySharanaruಭಾರತಕ್ಕೆ ಒಂದು ಭವ್ಯ ಪರಂಪರೆ ಇದೆ.ಅಂತಹ ಭವ್ಯ ಪರಂಪರೆಯನ್ನು ಅವಲಂಬಿಸಿ ನಮ್ಮ ದೇಶ, ನಾವು ಮುಂದುವರಿಯುತ್ತಾ ಇದ್ದೀವಿ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಸಾಂಸ್ಕೃತಿಕವಾದ ಹಿನ್ನಲೆಯನ್ನ ಗಮನಿಸಲಿಕ್ಕೆ ಸಾಧ್ಯತೆ ಇದೆ. ಈ ಒಂದು ಸಾಂಸ್ಕೃತಿಕವಾದ ಹಿನ್ನಲೆಯಲ್ಲಿ ಹಬ್ಬಗಳ ಆಚರಣೆಯನ್ನ ನಾವು ನೋಡುತ್ತ ಇದ್ದೀವಿ, ನಮ್ಮ ಜನ ಅವುಗಳನ್ನ ಆಚರಿಸುತ್ತಾ ಇದ್ದಾರೆ.

ಆದರೇ ನಾವು ಇವತ್ತು ಹಬ್ಬಗಳನ್ನ ಸಾಂಸ್ಕೃತಿಕ ಹಿನ್ನಲೆಯೊಂದಿಗೆ ಪರಿಸರ ರಕ್ಷಣೆಯ ಹಿನ್ನಲೆಯನ್ನಿಟ್ಟುಕೊಂಡು  ಆಚರಣೆ ಮಾಡಿದರೆ, ಅದು ಬಹಳ ಖುಷಿಯನ್ನು ಕೊಡುತ್ತದೆ.

ಇತ್ತೀಚೆಗೆ ಏನಾಗಿದೆಯೆಂದರೆ ಹಬ್ಬ ಹರಿದಿನಗಳಲ್ಲಿಯೂ, ವಿಕೃತವಾಗಿರುವ ಸಂಧರ್ಭವನ್ನು ನೋಡಲಿಕ್ಕೆ ಸಿಗುತ್ತದೆ.ಅಂತಹ ವಿಕೃತವಾದ ಸಂಧರ್ಭವನ್ನ ಕಡಿಮೆ ಮಾಡಿಕೊಂಡು, ಒಂದು ಸಾಂಸ್ಕೃತಿಕವಾದ ಸಂಧರ್ಭವನ್ನು ಹೆಚ್ಚು ಮಾಡಿಕೊಂಡು ಹೋದರೆ, ಹಬ್ಬಗಳು ನಿಜವಾಗಿಯೂ ಸಾರ್ವಜನಿಕ ಜೇವನದಲ್ಲಿ, ಅಥವ ವ್ಯಕ್ತಿಕ ಜೀವನದಲ್ಲಿ ಖುಷಿಯನ್ನ, ಸಂತೋಶವನ್ನ ನೀಡುವ ಸಂಧರ್ಭಗಳಿದ್ದಾವೆ.

ಯಾಕೆ ಇದ್ದನ್ನೆಲ್ಲಾ ಇಲ್ಲಿ ಹೇಳಬೇಕೆಂದರೆ, ಇನ್ನೇನು ಶ್ರಾವಣ ಮಾಸ ಮುಗಿತ್ತಾ ಇದ್ದ ಹಾಗೆ, ಮತ್ತೊಂದು ಹಬ್ಬ ಬರುತ್ತದೆ .. ಅದು ಗಣಪತಿ ಹಬ್ಬ. ಅಂತಹ ಒಂದು ಗಣಪತಿ ಹಬ್ಬದ ಆಚರಣೆಯಲ್ಲಿ, ಕೊನೆಯಲ್ಲಿ ತಾವು ಇಟ್ಟಂತಹ ಆ ಗಣಪತಿಯನ್ನ ನೀರಿನಲ್ಲಿ ವಿಸರ್ಜಿಸುತ್ತಾರೆ, ಅದು ಕುಡಿಯುವ ನೀರಿನ ಮೂಲಗಳಿಗೆ, ಉದಾಹರಣೆಗ ಬಾವಿಯಲ್ಲಿ, ಕೆರೆ, ನದಿ, ಸಮುದ್ರ ತೀರ ಪ್ರದೇಶದಲ್ಲಿ ವಿಸರ್ಜಿಸುತ್ತಾರೆ.ಅದೇ ನೀರು ಬಾವಿಗಳಲ್ಲಿ, ಬೋರ‍್ಗಳಲ್ಲಿ ಮತ್ತೆ ಶೇಖರಣೆ ಆಹುವಂತಹದ್ದು,  ಈ ಎಲ್ಲಾ ಹಿನ್ನಲೆಯನ್ನ ಗಮನಿಸಿದಾಗ, ನಮ್ಮವರು ಆ ಗಣಪತಿಯನ್ನ ಮಾಡುವಂತಹದಾಗಲಿ, ಅಥವ ವಿಸರ್ಜನೆಮಾಡುವಂತಹ ಸಮಯದಲ್ಲಾಗಲಿ, ಅದು ತುಂಬಾ ಕಲಾತ್ಮವಾಗಿ ಇದ್ದರೆ ತುಂಬ ಚೆನ್ನಾಗಿರುತ್ತದೆ ಆದರೂ ಅದರಿಂದ ಯಾವುದೇ ರೀತಿಯ ಮಾಲಿನ್ಯಕ್ಕೆ ಅವಕಾಶವಾಗಬಾರದು.

ಈ ರೀತಿ ಹಬ್ಬಗಳ ಆಚರಣೆಯಲ್ಲಿ ನಮ್ಮ ಪರಿಸರ, ನಮ್ಮ ನೆಲ, ಜಲ,ಇವು ಯಾವು ಸಹ ಮಾಲಿನ್ಯಕ್ಕೆ ಒಳಗಡೆಯಾಗದ ರೀತಿಯಲ್ಲಿ  ಆಚರಣೆ ಮಾಡಿದರೆ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಜಲ ಚೆನ್ನಾಗಿರುತ್ತದೆ, ನೆಲ ಚೆನ್ನಾಗಿರುತ್ತದೆ, ನಾವು ಚೆನ್ನಾಗಿರುತ್ತಿವಿ. ಇವೆಲ್ಲವನ್ನ ಗಮನದಲ್ಲಿಟ್ಟುಕೊಂಡು, ಈ ಹಬ್ಬವನ್ನ ಬಹಳ ಸೂಕ್ಷ್ಮವಾಗಿ ಆಚರಣೆಯನ್ನ ಮಾಡುವ ಸಂಧರ್ಭವನ್ನು ತಂದುಕೊಳ್ಳ ಬೇಕಗುತ್ತದೆ.

ಇಲ್ಲದೆಹೋದರೆ, ಯಥಾಪ್ರಕಾರವಾಗಿ ಸಿದ್ಧಪಡಿಸಿದ ಗಣಪತಿಯನ್ನ ಹೆಚ್ಚಿನ ರೀತಿಯಲ್ಲಿ ಬಣ್ಣ ಇತ್ಯಾದಿ ಗಣಪತಿಗಳನ್ನ, ಬಾವಿ ಇತ್ಯಾದಿ ನೀರಿನ ಮೂಲಗಳಲ್ಲಿ ವಿಸರ್ಜನೆ ಮಾಡುವುದರಿಂದ ಜಲ ಮಾಲಿನ್ಯವಾಗುವ ಸಾಧ್ಯತೆಯಿದೆ. ಆ ಜಲ ಮಾಲಿನ್ಯದ ಮೂಲಕವಾಗಿ, ಮಾನವನ ಆರೋಗ್ಯದ ಮೇಲೆ ದುಷ್ಪ್ರಿಣಾಮವಾಗುವುಗುವ ಸಾಧ್ಯತೆ ಇರುವುದರಿಂದ,ಅದರ ಬಗ್ಗೆ ಎಲ್ಲರು ಖಾಳಜಿಯನ್ನಿಟ್ಟು, ಬಹಳ ವೈಜ್ನಾನಿಕವಾಗಿ, ಈ ಹಬ್ಬವನ್ನ ಆಚರಣೆ ಮಾಡಿದರೆ ಸಂತೋಷ ಅಂತ ಭಾವಿಸುತ್ತೆವೆ.

ನಮ್ಮ ಶ್ರೀಮಠದಲ್ಲಿ, ಪರಿಸರವನ್ನ ಕಪಾಡುವ ಹಿನ್ನಲೆಯಲ್ಲಿ, ನಮ್ಮ ವಿಧ್ಯಾರ್ಥ್ಗಳು ಕೂದ , ಕೆಲವರು ಆ ದಿನವೆ ಮಣ್ಣಿನ ಗಣಪತಿಯನ್ನು, ತಯಾದು ಮಾಡಿ, ಪೂಜೆ ಮಾಡಿ, ಬೂಮಿಯಲ್ಲಿ ಹೂತುಹಾಕಿ ಬಿಡುತ್ತಾರೆ. ಮಣ್ಣಿನ ವಿಗ್ರಹ ಬೂಮಿಯಲ್ಲಿ ಹೂಳುವುದರಿಂದ ಸಮಸ್ಯೆ ಆಗುವುದಿಲ್ಲ. ಕುಡಿಯುವುದಕ್ಕೆ ನೀರು ಇರುವುದಿಲ್ಲ, ಇನ್ನು, ಎಲ್ಲಿ ಬಾವಿ ಹುಡುಕಿಕೊಂಡು ಎಲ್ಲಿ ಹೋಗುವುದು ಅಂತ್ ಹೇಲಿ.ಇದು ಕೆಲವರಿಗೆ ತಮಾಶೆ ಆಗಬಹುದು, ಆದರೂ, ಪರಿಸರವನ್ನು ಉಳಿಸಿವ ನಿಟ್ಟಿನಲ್ಲಿ ಈ ರೀತಿಯಾಗಿರುವ ಪ್ರಯತ್ನಗಳನ್ನ ಮಾಡಬೇಕಾಗಿದೆ ಅಂತ ನಾನು ಸಾರ್ವಜನಿಕರಿಗೆ ಒಂದು ಸಂದೇಶವನ್ನು ಇಲ್ಲಿ ರವಾನಿಸುತ್ತಾ ಇದ್ದೀನಿ.