CATEGORIES

NEWSLETER


 

ಪರಮಪೂಜ್ಯ ಸ್ವಾಮಿ ಬ್ರಹ್ಮಾನಂದಜಿ

BrahmanandajiF

ಸ್ವಾಮಿ ಬ್ರಹ್ಮಾನಂದ, ಚಿನ್ಮಯ ಮಿಷನ್, ಬೆಂಗಳೂರು

ನಮ್ಮ ಉಪನಿಷತ್ತುಗಳಲ್ಲಿ ಋಷಿಗಳು ಪರಮಾತ್ಮನ ಪೂಜೆಯನ್ನ ಮನಸ್ಸಿನ ಪ್ರಶಾಂತತೆಯಿಂದ ಮನಸ್ಸಿನ ಪ್ರಶಾಂತತೆಗಾಗಿ ಅಂತ ಹೇಳಿದ್ದಾರೆ. ಅಂದರೆ ನಮ್ಮ ಇಂದ್ರಿಯಗಳ, ಮನಸ್ಸಿನ, ಬುದ್ಧಿಯ ಒಡೆಯ ಗಣಪತಿ. ಗಣಾನಾಂ ಪತಿ. ನಾವು ಹೇಳುವಂತದ್ದೆ ಇದೆ –

ಗಣಾನಾಂ ತ್ವಾ ಗಣಪತಿಗುಂ ಹವಾಮಹೆ ಕವಿಂ ಕವೀನಾಂ ಉಪಮಶ್ರ ವಸ್ತಮಮ್ ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನಃ ಶ್ರುಣ್ವನ್ನೋತಿ ಭಿಃಸೀಧ ಸಾಧನಮ್. ಮಹಾಗಣಪತಯೇ ನಮಃ.

ಆ ಗಣಪತಿಯ ಒಂದು ಕಲ್ಪನೆ ನಮ್ಮ ಋಷಿಗಳು ಕಂಡುಕೊಂಡಂತ ಪರಮಾತ್ಮನ ಒಂದು ದೃಷ್ಟಿ ಅಪೂರ್ವವಾದದ್ದು. ಅದು ಹೊರಗಿನ ರೂಪವಲ್ಲ. ಇಂದ್ರಿಯಗಳು ಮನಸ್ಸು ಬುದ್ಧಿ ಹಿಂದಿರುವ ಗಣಪತಿ. ಗಣಾನಾಂ ಪತಿ. ಗಣಗಳು ಅಂದರೆ ಯಾವುದು? ನಮ್ಮ ಇಂದ್ರಿಯಗಳೇ ಗಣಗಳು, ನಮ್ಮ ಮನಸ್ಸೇ ಒಂದು ಗಣ. ನಮ್ಮ ಬುದ್ಧಿಯೇ ಒಂದು ಗಣ. ಗಣಗಳು ಅಂದರೆ ಸಂಸ್ಕೃತದಲ್ಲಿ ಬೆಳಗುವಂತ ದೇವತೆಗಳು ಅಂತ. ಹೊರ ಪ್ರಪಂಚವನ್ನು ಬೆಳಗುತ್ತಿರುವ ದೇವತೆಗಳೇ ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಇಂದ್ರಿಯಗಳು. ಆ ಇಂದ್ರಿಯಗಳನ್ನು  ಬೆಳಗುವ  ದೇವತೆ ಮನಸ್ಸು. ಮನಸ್ಸನ್ನು ಬೆಳಗುವ ದೇವತೆ ಬುದ್ಧಿ. ಇವೆಲ್ಲವೂ ಇದ್ದರೇ ನಾವು ಪ್ರಪಂಚವನ್ನು ಅನುಭವಿಸುವುದು.

ಆದರೆ ಒಂದು ವಿಚಾರ ಏನು ಈ ಇಂದ್ರಿಯಗಳು, ಈ ಮನಸ್ಸು, ಈ ಬುದ್ಧಿ ಎಲ್ಲವೂ ಜಡ. ಇವುಗಳು ಕೆಲಸ ಮಾಡುವುದು ಹೇಗೆ? ಇವುಗಳನ್ನು ಚೇತನಾತ್ಮಕ ಗೊಳಿಸುವವನು ಯಾರೋ ಅವನೇ ನಿಜವಾದ ಗಣಪತಿ. ಎಲ್ಲಿರುವವನು ಅವನು? ಬುದ್ಧಿಯ ಹಿಂದೆ. ಅವನಿಗೆ ರೂಪವಿಲ್ಲ. ಆ ಇಂದ್ರಿಯ ಮನಸ್ಸು ಬುದ್ಧಿಗಳ ಹಿಂದೆ ನಿರ್ಗುಣ ನಿರಾಕಾರನಾಗಿ ತೇಜೊರೂಪನಾಗಿ ಪ್ರಜ್ವಲಿಸುವ ಒಂದು ಚೈತನ್ಯ ಮೂರ್ತಿ ಗಣಪತಿ. ಅಲ್ಲಿ ಮನಸ್ಸು ಬುದ್ಧಿ ಹೋಗಬೇಕು. ಇದು ನಿಜವಾದ ಗಣಪತಿಯ ಪೂಜೆ. ಅರ್ಥಾತ್ ನಮ್ಮ ಇಂದ್ರಿಯ ಮನಸ್ಸು ಬುದ್ಧಿಯನ್ನ ನಾವು ಹತೋಟಿಯಲ್ಲಿಟ್ಟುಕೊಂಡು ಅವುಗಳನ್ನ ಅಂತರ್ಮುಖವಾಗಿಟ್ಟುಕೊಂಡು ಒಳಗೆ ಪ್ರಶಾಂತವಾಗಿ ನಿಂತಾಗ ನಾವು ಗಣಪತಿಯ ದರ್ಶನವನ್ನು ಮಾಡುವುದು.

ಇದು ಉಪನಿಷತ್ತಿನಲ್ಲಿ ಹೇಳಿರುವ ರೀತಿ. ಆದರೆ ಈಗ ಆ ರೀತಿಯ ಆರಾಧನೆ ಎನ್ನುವಂತಹದ್ದನ್ನ ಮರೆತು ಆಡಂಬರಕ್ಕೆ ಬಂದಿದ್ದೇವೆ. ಹೊರಗಿನ ಗಣಪತಿ. ಆ ಒಂದು ರೂಪವನ್ನ ಕೊಟ್ಟಿದ್ದೇವೆ ಸುಂದರಾಕಾರ, ಸಂತೋಷ. ದೊಡ್ಡ ತಲೆ, ಆನೆಯ ತಲೆ, ಅವನಿಗೊಂದು ದೊಡ್ಡ ಹೊಟ್ಟೆ, ಅಲ್ಲಿ ಅವನಿಗ ಒಳ್ಳೆ ರೀತಿಯ ಪೂಜೆ ಎಲ್ಲ ಸರಿ… ಆ ಪೂಜೆಯನ್ನು ಮಾಡುವಾಗ ನಿಜವಾಗಿ ಹೇಳಬೇಕೆಂದರೆ ನಮ್ಮ ಮನಸ್ಸು ಬುದ್ಧಿ ಅಂತರ್ಮುಖವಾಗಬೇಕು. ಪ್ರಶಾಂತವಾಗಿ ಅದು ಒಳಗೆ ಆತ್ಮನಲ್ಲಿ ನಿಲ್ಲುವ ಸಾಧನೆಯನ್ನು ಮಾಡಬೇಕು, ಅದನ್ನು ಬಿಟ್ಟು ಇವತ್ತಿಗೆ ನಮ್ಮ ಪೂಜೆ ಆಡಂಬರವಾಗಿದೆ ವಿಡಂಬನೆಯಾಗಿದೆ.

ಹೆಸರಿಗಾಗಿ ಒಂದು ಮೂರ್ತಿಯನ್ನಿಡುತ್ತೇವೆ, ಆಮೇಲೆ ಆರ್ಕೇಷಟ್ರಾ ಅಂತೆ, ಆಮೇಲೆ ಗಲಾಟೆಯಂತೆ, ಆಮೇಲೆ ಏನೇನೋ ಡ್ಯಾನ್ಸ್ ಗಳಂತೆ. ಆ ನಿಜವಾದ ದಾರಿಯನ್ನು ಬಿಟ್ಟು ಎಲ್ಲೋ ಹೊಗ್ತಿವಿ. ನಮ್ಮ ಯುವ ಪೀಳಿಗ ಹೀಗಾಗಬಾರದು. ನಮ್ಮ ಯುವಪೀಳಿಗೆ ಋಷಿಗಳ ಏನು ಒಂದು ಸಾಧನೆ ಇದೆ , ಋಷಿಗಳು ಹೇಳಿದ ದಾರಿಯನ್ನು ಮರಿಯಬಾರದು.

ಪೂಜೆ, ಭಜನೆ ಪ್ರಾರ್ಥನೆ ಅನ್ನುವಂತಹದು ನಮ್ಮ ಶ್ರೇಯಸ್ಸಿಗೆ, ನಮ್ಮ ಅದಃ ಪತನಕ್ಕಲ್ಲ. ಇದನ್ನು ಎಚ್ಚರವಾಗಿಟ್ಟುಕೊಂಡು ಆ ಗಣಪತಿಯ ಆರಧನೆಯಲ್ಲೂ ಕೂಡ ವಿಗ್ರಹವನ್ನು ಮಾಡುವುದರಿಂದ ಹಿಡಿದು, ಆ ಪೂಜೆ ಮಾಡುವಂತ ಮಂತ್ರಗಳಿಂದ ಹಿಡಿದು, ನಾವು ಅದನ್ನು ವಿಸರ್ಜನೆ ಮಾಡುವಾಗ ಕೂಡ ಎಚ್ಚರ ವಹಿಸಬೇಕು .

ನಾವು ಮಾಡುವ ಪೂಜೆಯಿಂದ, ಭಜನೆಯಿಂದ ಹತ್ತಿರದವರಿಗೆ, ಪರಿಸರಕ್ಕೆ, ನಮ್ಮ ಹತ್ತಿರದಲ್ಲಿರುವರು ಯಾರಿಗೂ ವಿಘ್ನಗಳು ಬರಬಾರದು, ತೊಂದರೆ ಆಗಬಾರದು. ಇನ್ನೊಬ್ಬರಿಗೆ ತೊಂದರೆ ಆಗುವ ಹಾಗೆ ಅವರ ಮನಸ್ಸಿಗೆ ಅಶಾಂತಿ ಆಗುವ ಹಾಗೆ ನಮ್ಮ ಪೂಜೆ ಭಜನೆ ಇರಬಾರದು.

ಆ ವಿಗ್ರಹವನ್ನು ತಯಾರು ಮಾಡುವವನು ಕೂಡ ಎಚ್ಚರ ವಹಿಸಬೇಕು. ಮಣ್ಣಿನ ವಿಗ್ರಹಗಳು ಅನ್ನುವಂತಹದನ್ನು ಮಾಡಿ ನಾನಾ ತರಹದ ಪೈಂಟ್ ಗಳನ್ನು ಬಳಸುವುದನ್ನ ನಿಲ್ಲಿಸಿ ಅವುಗಳನ್ನು ವಿಸರ್ಜನೆ ಮಾಡುವಾಗಲೂ ಕೂಡ ಶುದ್ಧ ನೀರಲ್ಲಿ ನಾವು ಮನೆಯಲ್ಲೇ ಮಾಡುವುದಾದರೆ ಇನ್ನೊಬ್ಬರಿಗೆ ಯಾರಿಗೂ ತೊಂದರೆ ಆಗಬಾರದು. ನಮ್ಮ ಪೂಜೆ, ಭಜನೆ ಮತ್ತೊಬ್ಬರಿಗೆ ಯಾವುದೇ ರೀತಿಯ ಅಡ್ಡಿ ಆತಂಕಗಳನ್ನು ತರಬಾರದು, ಪರಿಸರವನ್ನು ಮಲಿನ ಮಾಡಬಾರದು ಎನ್ನುವ ಎಚ್ಚರಿಕೆಯಿಂದ ನಾವು ಮಾಡಿದರೆ ಎಷ್ಟು ಸುಂದರವಾದ ಒಂದು ಸಾಧನೆ. ಇದನ್ನು ಮನಸ್ಸಲ್ಲಿಟ್ಟುಕೊಂಡು ಮಾಡುವುದಾದರೆ ಗಣಪತಿಗೂ ಆನಂದ, ಪರಿಸರಕ್ಕೂ ಆನಂದ ನಮ್ಮ ಒಂದು ಪೂಜೆ ಭಜನೆ ಸಮಾಜಕ್ಕೆ ಶ್ರೇಯಸ್ಸಾಗಬೇಕು. ಅಂತಹ ಒಂದೊ ಪರಿಕಲ್ಪನೆಯಿಂದ ಒಂದು ಭಗವಂತನ, ಗಣಪತಿಯ ಒಂದು ಆರಾಧನೆ, ಪೂಜೆ ಉತ್ಸವ ನಡೆಯಲಿ ಎನ್ನುವ ರೀತಿ ನಾವು ಎಲ್ಲರನ್ನ ಹೃತ್ಪೂರವಕವಾಗಿ ಮನವಿ ಮಾಡ್ಕೊಳ್ತೇನೆ.

Click  Here To Watch The Video Of Swami Brahmanandaji