
ಶತಾವಧಾನಿ ಡಾ|ಆರ್.ಗಣೇಶ್
ನಾವು ಗಣಪತಿಯನ್ನು ಪೂಜಿಸಿದಾಗ ನಾವು ಭೂತಾಯಿಯನ್ನು ಪೂಜಿಸುತ್ತಿವೆ.ಗಣಪತಿ ಕೃಷಿಯ ದೇವತೆ , ಅವನ ರೂಪದಲ್ಲಿ ನಾವು ಇದನ್ನು ನೋಡಬಹುದು. ಎರಡು ಮೊರ – ಎರಡು ದೋಡ್ಡ ಕಿವಿಗಳು, ಒಂದು ನೇಗಿಲು – ದಂತ, ನೀರು ಸರಬರಾಜಿಗೆ – ಸೊಂಡಿಲು.
ಗಣಪತಿಯ ವಿಗ್ರಹಗಳನ್ನು ಮೃತ್ತಿಕೆಯಿಂದ ತಯಾರಿಸಬೇಕು. ನಿಮ್ಮ ಕೈಯಿಂದಲೇ ಮಾಡಿದ ವಿಗ್ರಹಳನ್ನು ಪೂಜಿಸಿದರೆ ಶ್ರೇಷ್ಠ, ಅದರಲ್ಲಿ ಯಾವುದೇ ತೊಡಕು ಇದ್ದರೂ ಪರವಾಗಿಲ್ಲಾ.
ಆಗಮಗಳ ಪ್ರಕಾರ ತುಂಬಾ ದೋಡ್ಡ ಗಾತ್ರದ ವಿಗ್ರಹಗಳನ್ನು ನಿರ್ಮಿಸಬಾರದು. ಪೂಜೆ ಮಾಡಿದ ವಿಗ್ರಹದ ಗಾತ್ರದ ಹತ್ತುಪಟ್ಟಷ್ಟು ನೈವೇದ್ಯವನ್ನು ಮಾಡಬೇಕು , ಉದಾಹರಣೆಗೆ, ನಾವು ಮುಷ್ಠಿ ಗಾತ್ರದ ವಿಗ್ರಹಕ್ಕೆ ಪೂಜೆ ಮಾಡಿದಾಗ, ಅದಕ್ಕೆ ನೈವೇದ್ಯವಾಗಿ ಕನಿಷ್ಠ ೧ ಕೆ.ಜಿ. ಅಕ್ಕಿಯಷ್ಟು ಅನ್ನವನ್ನು ನೀಡಬೇಕು. ಈ ಪ್ರಮಾಣಗಳಲ್ಲಿ ನೈವೇದ್ಯ ಮಾಡದಿದ್ದರೆ, ಪೂಜೆ ಫಲವು ಸಿಗುವುದಿಲ್ಲಾ.
ಗಣಪತಿ ಹಬ್ಬವನ್ನು ಆಡಂಬರ, ವ್ಯಕ್ತಿಕ ಹೆಚ್ಚುಗಾರಿಕೆಗಳನ್ನು ಬಿಟ್ಟು, ನಿಜವಾದ ಭಕ್ತಿ, ಸಮರ್ಪಣಾಭಾವದಿಂದ ಕೂಡಿದ, ಪರಿಸರವನ್ನು ಮಾಲಿನ್ಯ ಮಾಡದಿರುವ, ನಮ್ಮ ಸಂಸ್ಕೃತಿ, ಪರಂಪರೆಗೆ ಪೂರಕವಾದ ರೀತಿಯಲ್ಲಿ ನಡೆಸಬೇಕೆಂದು ಎಲ್ಲರಲ್ಲೂ ಕೋರಿಕೊಳ್ಳುತ್ತೇನೆ.