CATEGORIES

NEWSLETER


 

ಪರಮಪೂಜ್ಯ ಸ್ವಾಮಿ ಹರ್ಷಾನಂದಜಿ

ಪರಮಪೂಜ್ಯ ಸ್ವಾಮಿ ಹರ್ಷಾನಂದಜಿ

ಪರಮಪೂಜ್ಯ ಸ್ವಾಮಿ ಹರ್ಷಾನಂದಜಿ

ಶ್ರೀ ಬಾಲಗಂಗಾಧರ್ ತಿಲಕರ ಪ್ರಯತ್ನಗಳಿಂದ ಗಣಪತಿ ಹಬ್ಬಕ್ಕೆ ಒಂದು ಸಾಮಾಜಿಕ ಆರಾಮದ ಮೆರಗು ತಂದಿದೆ. ಈ ಹಬ್ಬವು ನಾಡಿನ ಎಲ್ಲಾ ಭಾಗಗಳಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚು ಆಚರಿಸಲಾಗುತ್ತಿದೆ.

ನಮ್ಮ ಸಂಪ್ರದಾಯದ ಪ್ರಕಾರ,ಕೆರೆ ಮುಂತಾದ ನೀರಿನ ಮೂಲಗಳಲ್ಲಿರುವ ಮೃತ್ತಿಕೆಯಿಂದ ಗಣಪತಿಯ ವಿಗ್ರಹವನ್ನು ತಯಾರಿಸಬೇಕು.ಇತ್ತೀಚಿನ ದಿನಗಳಲ್ಲಿ,ಗಣಪತಿಯ ವಿಗ್ರಹಗಳಿಗೆ ಹಚ್ಚುವ ಬಣ್ಣಗಳಲ್ಲಿರುವ ಮಾರಕ ವಸ್ತುಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ.ಈ ರೀತಿಯ ಕೃತಕ ಬಣ್ಣಗಳ ಉಪಯೋಗ ನಿಲ್ಲಿಸಿ, ನೈಸರ್ಗಿಕವಾಗಿ ದೊರೆಯುವ ಬಣ್ಣಗಳನ್ನ ಉಪಯೋಗಿಸ ಬೇಕು, ಇಲ್ಲವಾದರೆ, ಬಣ್ಣಗಳಿಲ್ಲದ ವಿಗ್ರಹಗಳನ್ನು ಉಪಯೋಗಿಸಬೇಕು.

ಗಣಪತಿ ಉತ್ಸವದ ನೆಪದಲ್ಲಿ, ನಮ್ಮ ಸಂಪ್ರದಾಯಕ್ಕೆ,ಸಂಸ್ಕೃತಿಗೆ ವಿರುದ್ಧವಾದ ಚಟುವಟಿಕೆಗಳು ನಡೆಯುತ್ತಿರುವುದನ್ನು ನಾವು ನೋಡಬಹುದು. ಇಂತಹ ಚಟುವಟಿಕೆಗಳನ್ನು ನಿಲ್ಲಿಸಿ, ನಮ್ಮ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳ, ಆಚರಣೆಗಳ ಬಗ್ಗೆ ಸರಿಯಾದ ಅರಿವನ್ನು ಮೂಡಿಸಬೇಕು.

ನಮ್ಮ ಗುರುಹಿರಿಯರು ತೋರಿಸಿದ ಶ್ರೇಷ್ಠ ಹಾದಿಯಲ್ಲಿ ಗಣಪತಿ ಹಬ್ಬವನ್ನು ನಾವು ಆಚರಿಸಬೇಕು. ಈ ಹಬ್ಬವನ್ನು ಆಚರಿಸುವವರಿಗೆ ಶಾಂತಿ, ಶ್ರೇಯಸ್ಸು, ನೆಮ್ಮದಿ ಸಿಕ್ಕುವ ರೀತಿಯಲ್ಲಿ , ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಈ ಹಬ್ಬ ಆಚರಿಸಿಬೇಕು.